ಜಲಬಡಿಗೆ (ಜಲಧಕ್ಕೆ)
ಉದ್ದವಾದ ಪೈಪಿನಲ್ಲಿ ರಭಸದಿಂದ ನೀರು ಹರಿಯುತ್ತಿರುವಾಗ ಅದನ್ನು ಫಕ್ಕನೆ ಪ್ರತಿಬಂಧಿಸಿದರೆ ಆಗ ತಲೆದೋರುವ ತರಂಗಗಳ ಹೊಡೆತದಿಂದ ಉಂಟಾಗುವ ಸದ್ದು (ವಾಟರ್ ಹ್ಯಾಮರ್), ಸುತ್ತಿಗೆ ಹೊಡೆತ (ಹ್ಯಾಮರ್ ಬ್ಲೋ) ಎಂದೂ ಕರೆಯುವುದುಂಟು. ನೀರಿನ ಹರಿವಿಗೆ ಒಂದು ಕವಾಟದ ನೆರವಿನಿಂದ ಫಕ್ಕನೆ ತಡೆಯೊಡ್ಡಿದಾಗ ಅದರ ಸಂವೇಗ ಕ್ಷಿಪ್ರವಾಗಿ ನಾಶವಾಗುತ್ತದೆ. ಇದರಿಂದ ಪೈಪಿನಲ್ಲಿಯ ಒತ್ತಡ ತೀವ್ರವಾಗಿ ವರ್ಧಿಸುವುದು. ಕವಾಟದ ಸಮೀಪದಲ್ಲಿ ಮೊದಲು ಉದ್ಭವಿಸುವ ಈ ಒತ್ತಡದ ಹೆಚ್ಚಳ ಒಂದು ಸಂಮರ್ದ ತರಂಗವಾಗಿ ಮಾರ್ಪಟ್ಟು ನಳಿಗೆಯ ಉದ್ದಕ್ಕೂ ಪ್ರಸರಿಸುವುದು. ಇದು ನಳಿಗೆಯ ಇನ್ನೊಂದು ಕೊನೆಯನ್ನು ತಲುಪಿದಾಗ ಅಲ್ಲಿಂದ ಪ್ರತಿಫಲನಗೊಂಡು ತಿರುಗಿ ಕವಾಟದ ಕಡೆ ಪ್ರಸರಿಸುತ್ತದೆ. ಹೀಗೆ ಈ ಸಂಮರ್ದ ತರಂಗ ಅನೇಕ ಬಾರಿ ಪ್ರತಿಫಲನಗೊಳ್ಳುತ್ತ ಅದರ ಪಾರ (ಆಂಪ್ಲಿಟ್ಯೂಡ್) ಕ್ರಮೇಣ ಕ್ಷೀಣಿಸುತ್ತ ಬಂದು ಕೊನೆಗೆ ಲಯ ಹೊಂದುತ್ತದೆ. ಈ ತರಂಗ ಉದ್ಭವವಾದಾಗ ನಳಿಗೆಯೊಳಗೆ ಬಡಿದಂತೆ ಶಬ್ದವಾಗುತ್ತದೆ. ಇದೇ ಜಲಧಕ್ಕೆ. ನಮ್ಮ ಮನೆಗಳಲ್ಲಿಯೂ ಹರಿಯುತ್ತಿರುವ ನಲ್ಲಿಯ ನೀರನ್ನು ಫಕ್ಕನೆ ನಿಲ್ಲಿಸಿಬಿಟ್ಟಾಗಲೂ ಈ ಬಡಿತವನ್ನು ಕೇಳಬಹುದು.
   	ಕವಾಟವನ್ನು ಮುಚ್ಚುವುದಕ್ಕೆ ತೆಗೆದುಕೊಳ್ಳುವ ಕಾಲ ಮತ್ತು ಪೈಪಿನ ಉದ್ದ ಇವನ್ನು ಅವಲಂಬಿಸಿ ವರ್ದಿಸಿದ ಒತ್ತಡದ ಪ್ರಮಾಣ ಉಂಟು. ನಳಿಗೆಯ ಉದ್ದ ಟ ಅಡಿ ಅಡ್ಡಕೊಯ್ತದ ಸಲೆ ಂ ಚದರ ಅಡಿ ಮತ್ತು ನೀರಿನ ವೇಗ v ಅಡಿ/ಸೆ. ಆಗಿರಲಿ ಕವಾಟವನ್ನು ಮುಚ್ಚುವ ಕಾಲ ಣ ಸೆ. ಆಗಿರಲಿ. g ಗುರುತ್ವ ಮತ್ತು ಠಿ ನೀರಿನ ಸಾಂದ್ರತೆ ಆಗಿರಲಿ. ಆಗ

              ವರ್ಧಿಸಿದ ಒತ್ತಡ, p = plv
          gt                ಪೌಂಡು/ಚ.ಅ.
ಎಂಬ ಸಮೀಕರಣ ಠಿ ಯನ್ನು ಅಳೆಯುತ್ತದೆ.
ಪರಿಷ್ಕರಣೆ:
ಎಂ. ಜಿ. ಶ್ರೀನಿವಾಸನ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ